ಸುಮಿಟೋಮೋ ಕೆಮಿಕಲ್ ಇಂಡಿಯಾ ಲಿಮಿಟೆಡ್ ಎನ್ನುವುದು ಭಾರತದಲ್ಲಿ ಹೆಸರಾಂತ ಬೆಳೆ ರಕ್ಷಣಾ ಕೆಮಿಕಲ್ಸ್ ಕಂಪೆನಿಯಾಗಿದ್ದು, ತನ್ನ ಆವಿಷ್ಕಾರಕ ಉತ್ಪನ್ನಗಳಿಗೆ ಹೆಸರಾಗಿದೆ. ಎಸ್ ಸಿ ಐ ಎಲ್ ಪೇಟೆಂಟ್ ಪಡೆದ ಒಂದು ವಿಶಿಷ್ಠ ಶಿಲೀಂಧ್ರನಾಶಕವೆನಿಸಿದ "ಓರ್ಮೀ" ಎಂಬ ಹೆಸರಿನ ತನ್ನ ಹೊಸ ಉತ್ಪನ್ನವನ್ನು ಭಾರತೀಯ ರೈತರ ಸೇವೆಗಾಗಿ ನೀಡುತ್ತಿದೆ.
ಓರ್ಮೀ ಎಂದರೇನು?
ಓರ್ಮೀ ಎನ್ನುವುದು ಉತ್ತಮ ರೋಗ ನಿಯಂತ್ರಣಕ್ಕಾಗಿ ಸಾಟಿಯಿಲ್ಲದ ಕ್ರಿಯಾವಿಧಾನ ಹೊಂದಿರುವ ಎರಡು ಶಿಲೀಂಧ್ರನಾಶಕಗಳ ವಿಶಿಷ್ಟ ಸಂಯೋಜನೆಯಾಗಿದೆ.
1). ಓರ್ಮೀ ಸಸ್ಯ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುವ ಆಂಟಿ-ಬಯೋಟಿಕ್ ಆಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ತನ್ನ ರಕ್ಷಣಾ ಕಾರ್ಯವಿಧಾನವನ್ನು ಸುಧಾರಿಸಿಕೊಳ್ಳಲು ಮತ್ತು ರೋಗದ ಆಕ್ರಮಣವನ್ನು ತಡೆಯಲು ಸಾಧ್ಯವಾಗುವಂತೆ ಅಂತರಿಕವಾಗಿ ಬಲಿಷ್ಠವಾಗುವುದಕ್ಕೆ ಸಸ್ಯಕ್ಕೆ ಸಹಾಯ ಮಾಡುತ್ತದೆ. ಓರ್ಮೀ ತನ್ನ ಸಂಪರ್ಕ ಕ್ರಿಯೆಯ ಮೂಲಕ ಶಿಲೀಂಧ್ರ ಹೈಫೆಯ ಮೇಲೆ ಪ್ರಭಾವ ಬೀರುತ್ತಾ ಸಸ್ಯ ವ್ಯವಸ್ಥೆಯಲ್ಲಿ ಶಿಲೀಂಧ್ರದ ಪ್ರವೇಶ ಮತ್ತು ಹರಡುವಿಕೆಯನ್ನು ನಿಯಂತ್ರಿಸುತ್ತದೆ.
2). ಓರ್ಮೀ ಶಿಲೀಂಧ್ರದ ಜೀವಕೋಶದ ಪೊರೆಯಲ್ಲಿ ಸ್ಟೆರಾಲ್ ಜೈವಿಕ ಸಂಶ್ಲೇಷಣೆಯ ಮೇಲೆ ಪ್ರಭಾವ ಬೀರುತ್ತದೆ ಮತ್ತು ಶಿಲೀಂಧ್ರ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ.
ವೈಶಿಷ್ಟ್ಯಗಳು | ಪ್ರಯೋಜನಗಳು | ಲಾಭಗಳು |
---|---|---|
ವಿಶಿಷ್ಠ ಸಂಯೋಜನೆ ಕ್ರಿಯಾ ವಿಧಾನ | ಶಿಲೀಂಧ್ರದ ಮೇಲೆ ಮಲ್ಟಿ-ಸೈಟ್ ಕ್ರಿಯೆ | ಸಸ್ಯದ ರಕ್ಷಣಾ ಕಾರ್ಯವಿಧಾನವನ್ನು ನಿರ್ಮಿಸುತ್ತದೆ |
ರೋಗ ನಿಯಂತ್ರಣ | ಎರಡುವಿಧದ ಕ್ರಿಯೆ, ಸಂಪರ್ಕ ಮತ್ತು ಅಂತರ್ವಾಹಿ | ರಕ್ಷಣಾನಾತ್ಮಕ ಮತ್ತು ಪರಿಣಾಮಕಾರಿ ರೋಗ ನಿಯಂತ್ರಣ |
ಸಸ್ಪೆನ್ನನ್ | ಉತ್ತಮ ಸಾಮರ್ಥ್ಯ ಮತ್ತು ರೋಗನಿರೋಧಕತೆ ನಿರ್ವಹಣೆ | ಉತ್ಕೃಷ್ಠ ಫೈಟೋ ಟಾನಿಕ್ ಪ್ರಭಾವ |
ಕಾನ್ಸಂಟ್ರೇಟ್ | ಉತ್ತಮ ಕರಗುವಿಕೆ | ಸಸ್ಯಗಳಿಗೆ ಮತ್ತು ಪರಿಸರಕ್ಕೆ ಸುರಕ್ಷಿತ |
"ಓರ್ಮೀ" ಲಾಭಗಳು
ಸಸ್ಯದ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುತ್ತದೆ: ಓರ್ಮೀ ಸಸ್ಯದ ರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ ಮತ್ತು ಶೀಥ್ ಬೈಟ್ ರೋಗದ ವಿರುದ್ಧ ಹೋರಾಡುವುದಕ್ಕೆ ಭತ್ತದ ಗಿಡದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ರಕ್ಷಣಾತ್ಮಕ ಮತ್ತು ಪರಿಣಾಮಕಾರಿ ರೋಗ ನಿಯಂತ್ರಣ: ಓರ್ಮೀ ನಿರೋಧಾತ್ಮಕವಾಗಿ ಮತ್ತು ಶೀಘ್ರ ಉಪಶಮನಾತ್ಮಕವಾಗಿ ಕೂಡಾ ಕಾರ್ಯ ನಿರ್ವಹಿಸುತ್ತದೆ, ಹೀಗಾಗಿ ರಕ್ಷಣೆ ಮತ್ತು ಪರಿಣಾಮಕಾರಿ ರೋಗ ನಿಯಂತ್ರಣಗಳೆರಡನ್ನೂ ಒದಗಿಸುತ್ತದೆ.
ಉತ್ಕೃಷ್ಠ ಫೈಟೋಟಾನಿಕ್ ಪ್ರಭಾವ: ಓರ್ಮೀ ಸಿಂಪಡಿಸಿದಾಗ ಸಸ್ಯದ ಚಯಾಪಚಯ ವ್ಯವಸ್ಥೆ ಹೆಚ್ಚಾಗುತ್ತದೆ ಮತ್ತು ಗಿಡದ ಆರೋಗ್ಯ ಸುಧಾರಣೆಯಾಗುತ್ತದೆ ತನ್ಮೂಲಕ ಗಿಡ ಹಸಿರಾಗಿ ಬೆಳೆಯುತ್ತದೆ.
ಪ್ರಮಾಣ- 400 ಮಿ.ಲೀ./ಎಕರೆ
ಬೆಳೆ | ರೋಗ | ಪ್ರತಿ ಎಕರೆಗೆ ಡೋಸ್ | ಪ್ರತಿ ಎಕರೆಗೆ ನೀರಿನ ಪ್ರಮಾಣ |
---|---|---|---|
ಭತ್ತ | ಶೀಥ್ ಬೈಟ್ (ರೈಜೋಕ್ಟೋನಿಯಾ ಸೋಲಾನಿ) | 400 ಮಿ. ಲೀ. | 200 ಲೀ. |
ಭತ್ತದ ಬೆಳೆಯ ಶೀಥ್ ಬೈಟ್ ರೋಗದ ಸೂಚ್ಯಂಕ ಮತ್ತು ಓರ್ಮೀಗಾಗಿ ಬಳಕೆ ವಲಯ 1 ಮತ್ತು 2 ಮಾತ್ರಾ.
"ಓರ್ಮಿ" ಬಳಕೆಗೆ ಸರಿಯಾದ ಹಂತ, ಭತ್ತದ ಬೆಳೆಯಲ್ಲಿ ಕೇವಲ ಒಂದುಬಾರಿ ಮಾತ್ರಾ ಓರ್ಮಿ ಸಿಂಪಡಿಸಿ
ಹಂತ 1 - ನಿರೋಧಾತ್ಮಕ ಅಥವಾ
ಹಂತ 2- ರೋಗ ಕಾಣಿಸಿಕೊಂಡ ಆರಂಭದಲ್ಲಿ
ಗಮನಿಸಿ: ಕೇವಲ ನಿರೋಧಾತ್ಮಕವಾಗಿ ಅಥವಾ ರೋಗ ಕಾಣಿಸಿಕೊಂಡ ಆರಂಭದಲ್ಲಿ ಮಾತ್ರಾ ಓರ್ಮಿ ಸಿಂಪಡಿಸಬೇಕು.
ಭತ್ತದ ಬೆಳೆ ಹಂತ ಮತ್ತು "ಓರ್ಮಿ" ಸಿಂಪರಣೆಗೆ ಸಮಯ
*ಡಿಎಟಿ – ಕಸಿ ಮಾಡಿದ ನಂತರ ದಿನಗಳು
ಗಮನಿಸಿ: ಅಲ್ಪಾವಧಿಯ ಪ್ರಬೇಧಗಳು ಮೊದಲ ಸಿಂಪರಣೆ ಕಸಿ ಮಾಡಿದ 30-40 ದಿನಗಳ ನಂತರ.
ಓರ್ಮೀ ಗಾಗಿ ಸಂಪರ್ಕಿಸಿ
Safety Tips: