ಪೈಮ್ ಎನ್ನುವುದು ಒಂದು ಹೊಸ ರೀತಿಯ ಕೀಟನಾಶಕವಾಗಿದ್ದು. ಇದು ಬದನೆ ಬೆಳೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ. ಬಿಳಿನೊಣ, ಜಿಗಿಹುಳು, ಅಫಿಡ್ಸ್ ಮತ್ತು ಡ್ರಿಪ್ ಕೀಟಗಳನ್ನು ನಿಯಂತ್ರಿಸುತ್ತದೆ.
ಬದನೆ ಬೆಳೆಯ ರಸಹೀರುವ ಕೀಟಗಳ ಎಲ್ಲಾ ಹಂತಗಳಲ್ಲೂ (ಮೊಟ್ಟೆ, ಮರಿ ಮತ್ತು ಪ್ರೌಢ) ಕೆಲಸ ಮಾಡುತ್ತದೆ.
ಬಿಳಿನೊಣ, ಜಿಗಿಹುಳು, ಅಫಿಡ್ಸ್ ಮತ್ತು ಡ್ರಿಪ್ ಕೀಟಗಳ ನಿಯಂತ್ರಣಕ್ಕಾಗಿ ಬೇರೆ ಬೇರೆ ರೀತಿಯ ಔಷದಗಳನ್ನು ಮಿಶ್ರಣ ಮಾಡುವ ಅಗತ್ಯವಿಲ್ಲ, ಪೈಕ್ಲೋಮ್ ನಲ್ಲಿ ಎಲ್ಲವೂ ಇದೆ.
ಪೈಕ್ಲೋಮ್ SE ಸೂತ್ರೀಕರಣದಿಂದ ತಯಾರಿಸಲಾಗಿದೆ, ಆದ್ದರಿಂದಲೇ ಇದು ವಿಶೇಷವೆನಿಸಿದೆ.
ಪೈಕ್ಲೋಮ್ ಕೀಟದ ಎಲ್ಲಾ ಹಂತಗಳಲ್ಲೂ ಪರಿಣಾಮ ಬೀರುತ್ತದೆ ಮತ್ತು ನಿಯಂತ್ರಿಸುತ್ತದೆ.
ಪೈಕ್ಲೋಮ್ ಬೆಳೆಯನ್ನು ಹಸಿರಾಗಿ ಮತ್ತು ಆರೋಗ್ಯವಾಗಿ ಇರಿಸುತ್ತದೆ, ಇದರಿಂದಾಗಿ ಇಳುವರಿ ಹೆಚ್ಚಾಗಲು ಸಹಾಯಕವಾಗುತ್ತದೆ.
ಪೈಕ್ಲೋಮ್ ಅಂತರ್ವ್ಯಾಪಿ ಕ್ರಿಯೆ ಹೊಂದಿದ್ದು, ಎಲೆಗಳ ಮೂಲಕ ಮತ್ತು ಗಿಡದ ವ್ಯವಸ್ಥೆಯ ಮೂಲಕ ಪ್ರವಹಿಸಿ ರಸ ಹೀರುವ ಕೀಟಗಳನ್ನು ನಿಯಂತ್ರಿಸುತ್ತದೆ.
ಪ್ರಮಾಣ: ಬದನೆ ಬೆಳೆಯಲ್ಲಿ: 500 ಮಿಲೀ ಪ್ರತಿ ಎಕರೆ
ಬಳಕೆಯ ಹಂತ: ಬದನೆ ಬೆಳೆಯಲ್ಲಿ ಬಿಳಿನೊಣ, ಜಿಗಿಹುಳು, ಅಫಿಡ್ಸ್ ಮತ್ತು ಡ್ರಿಪ್ ಕೀಟಗಳು ಕಂಡುಬಂದ ಹಂತದಲ್ಲಿ ಉಪಯೋಗಿಸಬೇಕು.
ಯಾವರೀತಿ ಉಪಯೋಗಿಸಬೇಕು : ಬೆಳಗಿನ ಹಾಗೂ ಸಂಜೆ ವೇಳೆ (ತಂಪಾಗಿರುವ ಸಮಯದಲ್ಲಿ ) ಕನಿಷ್ಠ 200 ಲೀಟರ್ ನೀರಿನಲ್ಲಿ ಒಂದು ಎಕರೆಗೆ ಬೇಕಾಗುವಷ್ಟು ಔಷದ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.
ಪೈಕ್ಲೋಮ್ ಗಾಗಿ ಸಂಪರ್ಕಿಸಿ
Safety Tips: 