ಸುಮಿಟೊಮೊ ಕೆಮಿಕಲ್ ಇಂಡಿಯಾ ಲಿಮಿಟೆಡ್ ಭಾರತದಾದ್ಯಂತ ಹೊಸ ತಂತ್ರಜ್ಞಾನ ಮತ್ತು ನವೀನ ಉತ್ಪನ್ನಗಳ ತಯಾರಿಕೆಗೆ ಪ್ರಸಿದ್ಧವಾಗಿದೆ. ಪ್ರಪಂಚದಾದ್ಯಂತ ಲಭ್ಯವಿರುವ ತಮ್ಮ ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡುವ ವಿಶ್ವದ ಅತ್ಯುತ್ತಮ ವಿಜ್ಞಾನಿಗಳ ವರ್ಷಗಳ ಕಠಿಣ ಪರಿಶ್ರಮದ ನಂತರ ಭಾರತೀಯ ರೈತರಿಗೆ ಲಾಭದಾಯಕವೆಂದು ಸಾಬೀತಾಗುವ ಉತ್ಪನ್ನಗಳನ್ನು ತಯಾರಿಸುತ್ತಾರೆ.
ಸುಮಿ ಬ್ಲೂ ಡೈಮಂಡ್ TM ಕೂಡ ಅಂತಹದ್ದೇ ಕಠಿಣ ಪರಿಶ್ರಮದ ಫಲವಾಗಿದೆ. ವಿಶ್ವದಲ್ಲೇ ಅತಿ ದೊಡ್ಡ ಸಾವಯವ ಉತ್ಪನ್ನ ತಯಾರಿಕಾ ಕಂಪೆನಿಯೆಂದು ಹೆಸರಾಗಿರುವ, ಅಮೆರಿಕದಲ್ಲಿ ನೆಲೆಗೊಂಡಿರುವ ಸುಮಿಟೊಮೊ ಕೆಮಿಕಲ್ ನ ಸಹಾಯಕ ಕಂಪೆನಿಯಾದ ವೆಲೆಂಟ್ ಬಯೋಸೈನ್ಸ್ ಕಂಪೆನಿ ಸುಮಿ ಬ್ಲೂ ಡೈಮಂಡ್ TM ಅನ್ನು ತಯಾರಿಸಿದೆ.
ಸುಮಿ ಬ್ಲೂ ಡೈಮಂಡ್ TM ನಲ್ಲಿ ಕಂಡುಬರುವ ರಸದೂತಗಳು ಭತ್ತದ ಸಸ್ಯಗಳ ಬೆಳವಣಿಗೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಪ್ರಪಂಚದಾದ್ಯಂತ ಬಳಸಲ್ಪಡುತ್ತವೆ. ಭತ್ತ ಬೆಳೆಯುವ ಪ್ರಗತಿಪರ ರೈತರು ಸುಮಿ ಬ್ಲೂ ಡೈಮಂಡ್ TM ಅನ್ನು ತಮ್ಮ ಮೊದಲ ಆಯ್ಕೆ ಎಂದು ಪರಿಗಣಿಸುತ್ತಾರೆ ಮತ್ತು ಅದರ ಬಳಕೆಯಿಂದ ಬಹಳ ಸಂತೃಪ್ತರಾಗಿದ್ದಾರೆ.
ಪೇಟೆಂಟ್ ಮಾಡಲಾಗಿರುವ ತಂತ್ರಜ್ಞಾನ.
ಕೇಂದ್ರೀಯ ಕೀಟನಾಶಕ ಮಂಡಳಿಯಿಂದ ಪ್ರಮಾಣಿತ.
ಸಕ್ರಿಯ ಪದಾರ್ಥವನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದೆ.
ವಿಶಿಷ್ಠ ಸೂತ್ರೀಕರಣ.
ಬಳಕೆಗೆ ಸುಲಭ.
ಭೂಮಿ ಮತ್ತು ಪರಿಸರಕ್ಕೆ ಸುರಕ್ಷಿತ.
ಭತ್ತದ ಬೆಳಯ ಸಮರ್ಪಕ ಬೆಳವಣಿಗೆ - ಭತ್ತದ ಆರಂಭಿಕ ಹಂತದಲ್ಲಿ ಸಸ್ಯದ ಪೂರ್ಣ ಬೆಳವಣಿಗೆಯು ಬಹಳ ಮುಖ್ಯವಾಗಿರುತ್ತದೆ, ಸಂಪೂರ್ಣ ಬೆಳವಣಿಗೆ ಮತ್ತು ಭತ್ತದ ಸಸಿಗಳ ದ್ಯುತಿ ಸಂಶ್ಲೇಷಣೆ ಪ್ರಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಸುಮಿ ಬ್ಲೂ ಡೈಮಂಡ್ TM ನ ಉಪಯೋಗದಿಂದ ಭತ್ತದ ಗಿಡಗಳಲ್ಲಿ ಹಸಿರು ಹೆಚ್ಚಾಗುತ್ತದೆ ಮತ್ತು ಗಿಡಗಳ ಸ್ವರೂಪ ಹೆಚ್ಚಾಗುತ್ತದೆ ಮತ್ತು ಗಿಡಗಳು ಸಂಪೂರ್ಣವಾಗಿ ಬೆಳೆಯುತ್ತವೆ.
ಹೆಚ್ಚಿನ ತನಗಳು - ಹೆಚ್ಚಿನ ಇಳುವರಿ - ಸುಮಿ ಬ್ಲೂ ಡೈಮಂಡ್ TM ಭತ್ತದ ಸಸಿಗಳಲ್ಲಿ ತೆಂಡೆಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ತೆಂಡೆಗಳ ಗರಿಷ್ಠ ಇಳುವರಿ ಸಾಮಾನ್ಯವಾಗಿ ನಾಟಿ ಮಾಡಿದ ಮೂವತ್ತರಿಂದ ನಲವತ್ತು ದಿನಗಳ ನಂತರ ಕಂಡುಬರುತ್ತದೆ. ಭತ್ತದಲ್ಲಿ ಆರಂಭಿಕ ತೆನೆಗಳು ಮುಖ್ಯ ಕಾಂಡದಿಂದ ಬಂದು ಪರ್ಯಾಯ ಮಾದರಿಯಲ್ಲಿ ಹೊರಹೊಮ್ಮುತ್ತವೆ. ಆರಂಭಿಕ ತೆನೆ ಎಲ್ಲಕ್ಕಿಂತ ಕೆಳಗಿರುವ ನೋಡ್ಸ್ ನಿಂದ ಹೊರಹೊಮ್ಮುತ್ತದೆ ಮತ್ತು ಎರಡನೇ ತೆನೆ ಹುಟ್ಟಲು ಕಾರಣವಾಗುತ್ತದೆ. ಎರಡನೇ ತೆನೆ ಮೂರನೇ ತೆನೆಯ ಹುಟ್ಟಿಗೆ ಕಾರಣವಾಗುತ್ತದೆ.
ಪ್ರತ್ಯೇಕ ತೆನೆ ಒಂದು ಸ್ವತಂತ್ರ ಸಸಿಯಾಗಿರುತ್ತದೆ ಮತ್ತು ಸುಮಿ ಬ್ಲೂ ಡೈಮಂಡ್ TM ನ ಉಪಯೋಗದಿಂದ ತೆನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ ಇದರಿಂದ ಧಾನ್ಯಗಳ ಸಂಖ್ಯೆ ಕೂಡಾ ಹೆಚ್ಚಾಗುತ್ತದೆ.
ಭತ್ತದ ಗುಣಮಟ್ಟ ಮತ್ತು ತೆನೆಗಳ ಸಂಖ್ಯೆಯಲ್ಲಿ ಹೆಚ್ಚಿಸುತ್ತದೆ -ಸುಮಿ ಬ್ಲೂ ಡೈಮಂಡ್ TM ಬಳಕೆಯ ಆರಂಭದಿಂದಲೇ ಭತ್ತದ ಸಸಿಗಳ ಒಳಗೆ ಸಕ್ರಿಯವಾಗಿ ಕೆಲಸ ಮಾಡಲಾರಂಭಿಸುತ್ತದೆ. ಇದರಿಂದಾಗಿ ಸಸಿಗಳ ಸೂಕ್ತ ಬೆಳವಣಿಗೆಯಾಗುತ್ತದೆ ಮತ್ತು ತೆನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ.
ಸುಮಿ ಡೈಮಂಡ್ TM ನ ಉಪಯೋಗದಿಂದ ಸಸಿಗಳಲ್ಲಿ ತೆನೆಗಳು ಒಂದೇ ಸಮಯದಲ್ಲಿ ಮೂಡುತ್ತವೆ ಮತ್ತು ಅವುಗಳ ಸಂಖ್ಯೆ ಕೂಡಾ ಹೆಚ್ಚಳವಾಗುತ್ತದೆ.
ಸುಮಿ ಬ್ಲೂ ಡೈಮಂಡ್ TM ನ ಬಳಕೆಯ ಪ್ರಮಾಣ - ಭತ್ತದ ಬೆಳೆಯಲ್ಲಿ ಸುಮಿ ಬ್ಲೂ ಡೈಮಂಡ್ TM ಅನ್ನು ಪ್ರತಿ ಎಕರೆಗೆ 5 ಕಿಲೋಗ್ರಾಂ ನಂತೆ ಉಪಯೋಗಿಸಬೇಕು.
ಸುಮಿ ಬ್ಲೂ ಡೈಮಂಡ್ TM ಉಪಯೋಗಿಸಬೇಕಾದ ಸಮಯ - ಭತ್ತದ ಬೆಳೆಯಲ್ಲಿ ಸುಮಿ ಬ್ಲೂ ಡೈಮಂಡ್ TM ನ ಉಪಯೋಗವನ್ನು ಭತ್ತದ ನಾಟಿಯ ನಂತರ 15 ರಿಂದ 30 ದಿನಗಳೊಳಗಾಗಿ ಮಾಡಬೇಕು.
ಡಿ ಎಸ್ ಅರ್ ಭತ್ತದಲ್ಲಿ ಸುಮಿ ಬ್ಲೂ ಡೈಮಂಡ್ TM ಅನ್ನು ಬಿತ್ತನೆ ಮಾಡಿದ 30 ರಿಂದ 40 ದಿನಗಳೊಳಗಾಗಿ ಮಾಡಬೇಕು.
ಸುಮಿ ಬ್ಲೂ ಡೈಮಂಡ್ TM ಉಪಯೋಗಿಸುವ ವಿಧಾನ - ಸುಮಿ ಬ್ಲೂ ಡೈಮಂಡ್ TM ನ ಶಿಫಾರಸ್ಸು ಮಾಡಲಾಗಿರುವ ಪ್ರಮಾಣವನ್ನು ಗೊಬ್ಬರದೊಂದಿಗೆ ಬೆರೆಸಿ ಮತ್ತು ಕೇವಲ ಸಿಂಪರಣೆ ಮೂಲಕ ಮಾತ್ರ ಉಪಯೋಗಿಸಬಹುದು.
ಸುಮಿ ಬ್ಲೂ ಡೈಮಂಡ್ TM ಉಪಯೋಗಿಸುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು - ಅತ್ಯುತ್ತಮ ಫಲಿತಾಂಶಕ್ಕಾಗಿ ಸುಮಿ ಬ್ಲೂ ಡೈಮಂಡ್ TM ಅನ್ನು ಶಿಫಾರಸ್ಸು ಮಾಡಲಾಗಿರುವ ಪ್ರಮಾಣದಲ್ಲಿ ಮಾತ್ರ ಉಪಯೋಗಿಸಿ.
ಸುಮಿ ಬ್ಲೂ ಡೈಮಂಡ್ TM ಅನ್ನು ಕೇವಲ ಚಿಮುಕಿಸಲು ಮಾತ್ರ ಉಪಯೋಗಿಸಿ.
ನೀವು ಸುಮಿ ಬ್ಲೂ ಡೈಮಂಡ್ TM ಖರೀದಿಸಲು ಬಯಸಿದರೆ ದಯವಿಟ್ಟು ಸ೦ಪರ್ಕಿಸಿ
ಸುರಕ್ಷತಾ ಸಲಹೆಗಳು:
***ಈ ಜಾಲತಾಣದಲ್ಲಿ ನೀಡಲಾಗಿರುವ ಮಾಹಿತಿ ಕೇವಲ ಉಲ್ಲೇಖಕ್ಕಾಗಿ ಮಾತ್ರ ಉಪಯೋಗ ಕುರಿತ ಪೂರ್ಣ ವಿವರ ಮತ್ತು ಸೂಚನೆಗಳಿಗಾಗಿ ಯಾವಾಗಲೂ ಉತ್ಪನ್ನದ ಲೇಬಲ್ ಮತ್ತು ಕರಪತ್ರವನ್ನು ಓದಿ.