ಹೆಲಿಬೆಕ್ಸ್
ಹೆಲಿಬೆಕ್ಸ್ ಇದ್ದರೆ ನಿಶ್ಚಿಂತೆ!
ಬಲವಾದ ಮತ್ತು ವಿಶಿಷ್ಟವಾದ ಕಾರ್ಯ ವಿಧಾನದಿಂದ ಚಾಲಿತ ಹೆಲಿಬೆಕ್ಸ್, ಪರಿಣಾಮಕಾರಿ ಬೆಳೆ ರಕ್ಷಣೆಯನ್ನು ನೀಡಲು ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ಮನಸ್ಸಿನ ಶಾಂತಿಯನ್ನು ಬೆಂಬಲಿಸುತ್ತದೆ.
ಮಿ.ಲೀ./ಎಕರೆ
ಕಾರ್ಯ ವಿಧಾನ
ಹೆಲಿಬೆಕ್ಸ್
ಇದ್ದರೆ ನಿಶ್ಚಿಂತೆ!
ಕೃಷಿಯಲ್ಲಿ, ಉನ್ನತ-ಗುಣಮಟ್ಟದ ಇಳುವರಿ ಸಾಧಿಸಲು ನೀವು ಹೃದಯಪೂರ್ವಕವಾಗಿ ಪ್ರಯತ್ನಿಸುತ್ತೀರಿ. ನಿಮ್ಮ ಸಮರ್ಪಣಾ ಭಾವವು ಲಾಭದಾಯಕತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಒಂದು ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೂ ಸಹಾಯ ಮಾಡುತ್ತದೆ.
ನಿಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ, ಬೆಳೆಯ ಋತುವಿನಾದ್ಯಂತ ಹಲವಾರು ಅಪಾಯಗಳಿಗೆ ಬೆಳೆಗಳು ದುರ್ಬಲವಾಗಿಯೇ ಉಳಿಯುತ್ತವೆ. ಅಂತಹ ಒಂದು ಬೆದರಿಕೆಯೇ ಲೆಪಿಡೋಪ್ಟೆರಾನ್ ಕೀಟಗಳಾಗಿದ್ದು, ಇವು ಬೆಳೆಗಳಿಗೆ ಹಾನಿ ಉಂಟುಮಾಡುತ್ತವೆ ಮತ್ತು ನಿಮ್ಮ ಲಾಭದಾಯಕತೆಯನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ, ಅಸ್ತಿತ್ವದಲ್ಲಿರುವ ಬೆಳೆ ಸಂರಕ್ಷಣಾ ಪರಿಹಾರಗಳ ಅಸಮಂಜಸ ಕಾರ್ಯಕ್ಷಮತೆಯು ಕೃಷಿ ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಮನಸ್ಸಿನ ಶಾಂತಿಯ ಮೇಲೆ ಪರಿಣಾಮ ಬೀರುತ್ತದೆ.
ಈ ಸವಾಲುಗಳನ್ನು ಎದುರಿಸುವುದಕ್ಕೆ ಸಹಾಯ ಮಾಡಲು, ಸುಮಿಟೋಮೆ ಕೆಮಿಕಲ್ ಇಂಡಿಯಾ ಲಿಮಿಟೆಡ್ ಪ್ರಸ್ತುತಪಡಿಸುತ್ತಿದೆ
ಹೆಲಿಬೆಕ್ಸ್ ಅನ್ನು ಏತಕ್ಕಾಗಿ ಆಯ್ಕೆ ಮಾಡಿಕೊಳ್ಳಬೇಕು ?
ಹೆಲಿಬೆಕ್ಸ್ ಎನ್ನುವುದು ಎರಡು ಶಕ್ತಿಶಾಲಿ ರಾಸಾಯನಿಕಗಳ ಸಹಕ್ರಿಯೆಯ ಸಂಯೋಜನೆಯಾಗಿದ್ದು, ಇದು ಗುರಿಯಾಗಿಸಿಕೊಂಡ ಕೀಟಗಳ ಮೇಲೆ ವಿಶಿಷ್ಟವಾದ ಕ್ರಿಯಾ ವಿಧಾನ ತೋರುತ್ತದೆ.
ಹೆಲಿಬೆಕ್ಸ್ ಜೀವಕೋಶೀಯ ಪ್ರೋಟೀನ್ ಸಂಶ್ಲೇಷಣೆಯನ್ನು ಪ್ರತಿಬಂಧಿಸುತ್ತದೆ, ಇದು ಜೀವಕೋಶದ ನೆಕ್ರೋಸಿಸ್ ಗೆ ಕಾರಣವಾಗುತ್ತದೆ. ಮರಿಕೀಟಗಳು ಆಹಾರ ಸೇವನೆ ನಿಲ್ಲಿಸಿದ ತಕ್ಷಣ ಇದರ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತದೆ. ಚರ್ಮದ ಮೇಲೆ ನೆಕ್ರೋಸಿಸ್ ನೊಂದಿಗೆ ಕೀಟದ ದೇಹವು ಸಡಿಲಗೊಳ್ಳುತ್ತದೆ ಮತ್ತು ಬಹಳ ಪರಿಣಾಮಕಾರಿಯಾಗಿ ಕೊಲ್ಲಲ್ಪಡುತ್ತದೆ.
ಕಂಟ್ರೋಲ್
ಟ್ರೇಟೆಡ್
ಕೀಟದ "ವೈರಿಂಗ್" (ನರಗಳು) ಮತ್ತು ಅದರ "ಕಟ್ಟಡದ ಬ್ಲಾಕ್ ಗಳು" (ಕೋಶಗಳು) ಎರಡರ ಮೇಲೂ ದಾಳಿ ಮಾಡುವ ಮೂಲಕ, ಹೆಲಿಬೆಕ್ಸ್ ತ್ವರಿತ ಆಹಾರ ಸೇವನೆ ನಿಲುಗಡೆ ಮತ್ತು ದೀರ್ಘಾವಧಿಯ ನಿಯಂತ್ರಣವನ್ನು ಖಚಿತಪಡಿಸುತ್ತದೆ.
ಹೆಲಿಬೆಕ್ಸ್ : ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು
ತ್ವರಿತ ಆಹಾರ ಸೇವನೆ ನಿಲ್ಲಿಸುವುದು
ಕೀಟಗಳ ಆಹಾರ ಸೇವನೆ ತಕ್ಷಣವೇ ನಿಲ್ಲಿಸಲ್ಪಡುತ್ತದೆ ಮತ್ತು ಇದರಿಂದಾಗಿ ಮತ್ತಷ್ಟು ನಷ್ಟವಾಗದಂತೆ ತಡೆಗಟ್ಟಿದಂತಾಗುತ್ತದೆ.
ದೀರ್ಘಾವಧಿಯ ನಿಯಂತ್ರಣ
ದ್ವಿಮುಖ ಕ್ರಿಯಾ ವಿಧಾನದ ಸಹಯೋಗದೊಂದಿಗೆ ಗುರಿಯಾಗಿಸಿಕೊಂಡ ಕೀಟಗಳ ಮೇಲೆ ದೀರ್ಘಾವಧಿಯ ನಿಯಂತ್ರಣವನ್ನು ಒದಗಿಸುತ್ತದೆ.
ವಿಶಾಲ ವ್ಯಾಪ್ತಿಯ ನಿಯಂತ್ರಣ
ವ್ಯಾಪಕ ಶ್ರೇಣಿಯ ಲೆಪಿಡಾಪ್ಟೆರಾನ್ ಕೀಟಗಳಿಗೆ ಪರಿಣಾಮಕಾರಿ ನಿರ್ವಹಣಾ ಸಾಧನವನ್ನು ಒದಗಿಸುತ್ತದೆ.
ಪ್ರತಿರೋಧಕತೆ ನಿರ್ವಹಣಾ ಸಾಧನ
ವಿಶಿಷ್ಟ ಕ್ರಿಯಾವಿಧಾನದೊಂದಿಗೆ ಗುರಿಯಾಗಿಸಿಕೊಂಡ ಕೀಟ ನಿರೋಧಕ ನಿರ್ವಹಣೆಗೆ ಸೂಕ್ತವಾದ ರೊಟೇಷನ್ ಆಯ್ಕೆಗಳನ್ನು ಒದಗಿಸುತ್ತದೆ.
ಉತ್ಕೃಷ್ಠ ಮಳೆ ನಿರೋಧಕತೆ
ಸಿಂಪಡಿಸಿದ ತಕ್ಷಣ ಮಳೆ ಸುರಿದರೂ ಕೂಡಾ, ಉನ್ನತ ಕೀಟ ನಿಯಂತ್ರಣ ಸಾಮರ್ಥ್ಯ.
ಬಲವಾದ ಮತ್ತು ವಿಶಿಷ್ಟವಾದ ಕಾರ್ಯ ವಿಧಾನದಿಂದ ಚಾಲಿತ ಹೆಲಿಬೆಕ್ಸ್, ಪರಿಣಾಮಕಾರಿ ಬೆಳೆ ರಕ್ಷಣೆಯನ್ನು ನೀಡಲು ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ಮನಸ್ಸಿನ ಶಾಂತಿಯನ್ನು ಬೆಂಬಲಿಸುತ್ತದೆ.
ಬೆಳೆಗಳಲ್ಲಿನ ಪ್ರಮುಖ ಕೀಟಗಳು
ಜೋಳ
ಫಾಲ್ ಆರ್ಮಿವರ್ಮ್
ಕಾಂಡ ಕೊರಕ
ಸೋಯಾಬೀನ್
ಸ್ಪೋಟೋಸ್ಟೆರಾ
ಸೆಮಿ ಲೂಪರ್
ಗಿರ್ಡಲ್ ಜೀರುಂಡೆ
ಹೆಲಿಕೋವರ್ಪಾ
ಹೆಲಿಬೆಕ್ಸ್ ಬಗ್ಗೆ ರೈತರ ಅಭಿಪ್ರಾಯಗಳು
ರೈತರ ಅನುಭವಗಳನ್ನು ತಿಳಿದುಕೊಳ್ಳಿ ಮತ್ತು ಹೆಲಿಬೆಕ್ಸ್ ಅವರುಗಳ ಬೆಳೆಗಳನ್ನು ಹೇಗೆ ಉತ್ತಮಗೊಳಿಸಿದೆ ಎಂದು ನೋಡಿ.
ಹೆಲಿಬೆಕ್ಸ್ ಕುರಿತು ಹೆಚ್ಚಿನ ಮಾಹಿತಿ ಬೇಕೇ?
ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಜಿಲ್ಲೆಯನ್ನು ಹಂಚಿಕೊಳ್ಳಿ. ನಮ್ಮ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ.